Forest minister Ramanath Rai became the victim of Honeybee attack in Belagavi. Ramanath Rai had come to inaugurate the Biosphere park in Belagavi when honeybees attacked him and others, which forced him to immediately leave the place. Honey bees stings Karnataka forest minister Ramanatha Rai in Belagavi. Minister was attending a inauguration function in that time Honey bees attacks the stage. Minister left the place with pain.
ಬೆಳಗಾವಿ : ಅರಣ್ಯ ಸಚಿವರ ಮೇಲೆ ಹೆಜ್ಜೇನು ದಾಳಿ. ವೇದಿಕೆ ಮೇಲೆ ಕೂತು ರಾಜ್ಯದ ಅರಣ್ಯಗಳ ಬಗ್ಗೆ ಪುಂಖಾನು ಪುಂಖಾನವಾಗಿ ಮಾತನಾಡಲು ಸಜ್ಜಾಗಿದ್ದ ಅರಣ್ಯ ಸಚಿವ ರಮಾನಾಥ ರೈ ಮೇಲೆ ಜೇನು ಹುಳುಗಳು ಸಾಮೂಹಿಕವಾಗಿ ದಾಳಿ ನಡೆಸಿ ಸಚಿವರ ಮುಸುಡಿಗೆ ಮುತ್ತಿಕ್ಕಿ ಅವರ ಮುಖಾರವಿಂದ ಇನ್ನಷ್ಟು 'ಅರಳುವಂತೆ' ಮಾಡಿವೆ.ಜಿಲ್ಲೆಯಲ್ಲಿ ವಿಟಿಯು ಕಾಲೇಜಿನ ಬಳಿಯ ನೂತನ ಉದ್ಯಾನವನ ಉದ್ಘಾಟನಾ ಸಮಾರಂಭಕ್ಕೆ ಹೋಗಿ ವೇದಿಕೆ ಏರಿ ಕೂತಿದ್ದ ಅರಣ್ಯ ಸಚಿವರಿಗೆ ಜೇನು ಹುಳುಗಳು ಕಚ್ಚಿ ಸಚಿವರು ಸ್ಥಳದಿಂದಲೇ ಪೇರಿ ಕೀಳುವಂತೆ ಮಾಡಿವೆ.ಸಚಿವರಗೆ ಮಾತ್ರವಲ್ಲದೆ ಸಮಾರಂಭದಲ್ಲಿ ಭಾಗವಹಿಸಿದ್ದ ಸಾಕಷ್ಟು ಅಧಿಕಾರಿಗಳು, ಸಿಬ್ಬಂದಿಗಳು ಸಹ ಜೇನು ದಾಳಿಯಿಂದ ಮೂಖ ಊದಿಸಿಕೊಂಡು ಹನುಂತನ ಸಹೋದದರಂತಾಗಿದ್ದಾರೆ.ದಾಳಿ ನಡೆದ ಕೂಡಲೇ ಅರಣ್ಯ ಸಚಿವರನ್ನು ರಕ್ಷಿಸಲು ಅರಣ್ಯ ಇಲಾಖೆಯ ಸಿಬ್ಬಂದಿ ಸಚಿವರ ಸುತ್ತಲೂ ಮಾನವ ಕೋಟೆ ಕಟ್ಟಿದರೂ ಸಹ, ಕೋಟೆ ಬೇಧಿಸಿ ಬಂದ ಕೆಲವು ಜೇನು ಹುಳುಗಳು ಸಚಿವರಿಗೆ ಕುಟುಕಿ ಹೋಗಿವೆ.